*ಸ್ನೇಹ*
ಅಂತರಂಗದ ಭಾವನೆಗಳು ಒಡಮೂಡಿವೆ
ಸಮಾನ ಮನಸ್ಸಿನ ವ್ಯಕ್ತಿಯೆದುರು
ನೀಡುವನು ಚೈತನ್ಯವನು ಉಲ್ಲಾಸ ತುಂಬಿರಲೆಂದು
ಕೈಹಿಡಿದು ನಡೆಯುವನು ಜೀವನ ಸುಂದರವಾಗಿರಲೆಂದು
ಯಾರು ಏನೆಂದರೇನು ಎನಗೆ ಭಯವಿಲ್ಲ
ಕಾರಣ ನಮ್ಮಿಬ್ಬರ ಮನದಲ್ಲಿ ಅಳುಕಿಲ್ಲ
ಪಿಸುಗುಡುವವರು ಜನರು
ಕಿವಿಗೊಡದಿರುವೆವು
ಕಾರಣ ನಾಲಗೆಗೆ ಮೂಳೆಯಿಲ್ಲ
ಸಂಪತ್ತಿನ ಕದನ ನಮ್ಮಿಬ್ಬರಲಿಲ್ಲ
ಕಾರಣ ಕೊನೆಯಲ್ಲಿ ನಾವು ಹೊತ್ತುಕೊಂಡು ಹೋಗುವುದಿಲ್ಲ
ಬಾಳಬೇಕು ನೂರುಕಾಲ
ಮಿಡಿಯಬೇಕು ಹೃದಯ ಬಹುಕಾಲ
ನೀವಂದುಕೊಂಡಿರಬಹುದು ಇವರು ಜೋಡಿಗಳೆಂದು
ಹೌದು, ನಾವು ಕಲ್ಮಶವರಿಯದ ನಿಜವಾದ ಪ್ರಾಣ ಸ್ನೇಹಿತರು..