*ಹಳ್ಳಿ ಜೀವನ*
ಬಾರೆ ಶಾಂತವ್ವ ಬಾರೆ
ಬಿತ್ತೋಕೋಗೋಣ...
ಬಾರೆ ಶಾಂತವ್ವ ಬಾರೆ
ಬಿತ್ತೋಕೋಗೋಣ....
ಬಾರಿಕೋಲು ಹಿಡಿದು ಮಾವ ಹೊಂಟಾನ
ಬುತ್ತಿಗಂಟು ಹಿಡಿದು ನಾನು ಹೊಂಟೀನಿ
ನೀನು ಬಂದರೆ ಬಾರೆ ದಾರಿ ದೂರೈತಿ
ಮಾತನಾಡಿ ಮಾತನಾಡಿ ದಾರಿ ಸವೆಸೋಣ
ಬಾರೆ ಶಾಂತವ್ವ ಬಾರೆ ...
ಎಳ್ಳ ಹಚ್ಚಿ ರೊಟ್ಟಿ ಬಡಿದು ನಾನು ಹೊಂಟೀನಿ
ತಿಕ್ಕಿ ತಿಕ್ಕಿ ಚಕ್ಕಡಿ ತೊಳೆದು ಮಾವ ಹೊಂಟಾನ
ನೀನು ಬಂದರೆ ಬಾರೆ ಮಾತನಾಡೋಣ ಮಾತನಾಡುತ ನಾವು ದಾರಿ ಸವೆಸೋಣ
ಗುರಳ್ಳು ಹಿಂಡಿ ಮಾಡಿಕೊಂಡು ನಾನು ಹೊಂಟೀನಿ
ಚಕ್ಕಡಿ ಕೊಳ್ಳ ಕಟ್ಟಿ ಮಾವ ಹೊಂಟಾನ
ನೀನು ಬಂದರ ಬಾರೆ ಮಾತನಾಡೋಣ ಮಾತನಾಡಿ ಅತ್ತಿಮಾವನ ಹಿತವ ಬಯಸೋಣ
ಬಾರೆ ಶಾಂತವ್ವ ಬಾರೆ...
✍️ *ಪ್ರವೀಣ ಪಾಟೀಲ, ಬ್ಯಾಡಗಿ* ✍️
No comments:
Post a Comment