*_ಕತ್ತಲೆಯಿಂದ ಬೆಳಕಿನೆಡೆಗೆ_*
*ಸಿಹಿ-ಕಹಿ ಭಾವನೆಗಳಲ್ಲಿ* *ಹೊರಳಾಡಿದ ಮನವೇಕೆ ಇಂದು ಮಂಕಾಗಿದೆ*
*ಹೃನ್ಮನಗಳನ್ನು ಆಕಾಶದೆತ್ತರಕ್ಕೆ ಹಾರಿಸಿದ ಮನವೇಕೆ ಇಂದು ಮಂಕಾಗಿದೆ*
*ಖಾಲಿಯಿದ್ದ ಹೃದಯದಲ್ಲಿ* *ಪ್ರೀತಿಯ ಮಳೆಗರೆದ ಮನವೇಕೆ ಇಂದು ಮಂಕಾಗಿದೆ*
*ಪ್ರೀತಿಯ ಚಿಗುರೊಡೆಸಿ ನನ್ನ ಮೈ ಮರೆಸಿದ ಮನವೇಕೆ ಇಂದು ಮಂಕಾಗಿದೆ*
*ಯಾವ ಭೂತ-ಪ್ರೇತಗಳು ಆವರಿಸಿದವೋ*
*ಯಾವ ನಿಜ-ವಾಸ್ತವಗಳು ಎಚ್ಚರಿಸಿದವೋ*
*ಯಾರ ಹಿತನುಡಿಗಳು ಹೀಗೆ ಮಾಡದವೋ*
*ಯಾರ ಕಹಿ ಮಾತುಗಳು ಹೀಗೆ ನಿಲ್ಲಿಸಿದವೋ*
*ಪ್ರೀತಿಯ ಸೆಲೆಯಲ್ಲಿ ಸಿಲುಕಿದ*
*ಮನ ಹೊರಗೇಕೆ* *ಬಂದಿರುವುದೋ*
*ಆಜ್ಞೆಯಂತೆ ಶಿರಸಾ ವಹಿಸಿ ಪಾಲಿಸಿದ*
*ಮನ ವಾಸ್ತವವನ್ನು ಅರಿತಿರುವುದೋ*
*ನೆಮ್ಮದಿಯ ಬದುಕು ಸಾಗಿಸಲು*
*ಮುಂದಾಗಿರುವುದೋ*
*ನಿಷ್ಕಲ್ಮಶ ಸ್ನೇಹಕ್ಕ ಕೈ ಚಾಚಲು*
*ತಿಂತಿರುವುದೋ ನಾನರಿಯೆ*
*ಓ ಮನವೇ*
*ಸಾಕಿನ್ನು ಈ ಬಂಧನ*
*ಮುನ್ನಡಿಯಿಡು*
*ನಿನಗಾಗಿ ಕಾದಿಹುದು ನಿತ್ಯ ನಂದನ*
✍️ *ಪ್ರವೀಣ ಪಾಟೀಲ್, ಬ್ಯಾಡಗಿ* ✍️
⚫⚫⚫⚫⚫⚫⚫⚫⚪⚪⚪⚪⚪⚪⚪⚪
No comments:
Post a Comment