Saturday, February 27, 2021

ತಾಯಿಯಿಲ್ಲದ ತವರು

 *ತಾಯಿಯಿಲ್ಲದ ತವರು*



ಏಕೆ ಸಿಡಿಮಿಡಿಗೊಳ್ಳುವೆ ಮಡದಿ

ಅವಳಿಂದಲೇ ನೀ ನನ್ನ ಕೈ ಹಿಡಿದಿ

ಅಮ್ಮನಿಗೆ ನೀಡುವಾಗ ಮುಸಿ ಮುಸಿ ಎನ್ನುವೆ 

ಗೊತ್ತಿಲ್ಲದಂತೆ ತಂಗಳು ಸೇರಿಸಿ ಬಡಿಸುವೆ



ಯಾವಾಗ ಹೋದೀತೋ ಎಂದು ಮನದಲ್ಲಿ ಕೊರಗುವೆ

ತಿಳಿದುಕೋ ಅವಳಿಗೆ ಅಷ್ಟು ಬೇಗ ಕರೆ ಬರುವುದಿಲ್ಲ

ಕರೆ ಬಂದರೂ ನಾ ಸದ್ಯಕ್ಕೆ ಅವಳನ್ನು ಬಿಡುವುದಿಲ್ಲ



ನಮ್ಮ ಸಹೋದರಿ ಬಂದಾಗ 

ಮಾಡುತ್ತೀ ನೀ ಬಿಂಕು ಬಿನ್ನಾಣ

ನೀನೂ ತವರಿಗೆ ಹೋದಾಗ ಹೀಗಾದರೆ ಆಗುವುದು ನಿನ್ನ ಮುಖ ಚಿತ್ರಾನ್ನ



ಅರಿತು ನಡೆ ನೀನೂ ಹೆಣ್ಣಾಗಿ 

ನನ್ನ ತಾಯಿಯ ಸೊಸೆಯಾಗಿ

ನಮ್ಮ ಮಗಳ ತಾಯಿಯಾಗಿ

ನಮ್ಮ ಮಗನ ಹೆಂಡತಿಯ ಅತ್ತೆಯಾಗಿ



ಯಾಕೆ ನಿನಗೆ ನಮ್ಮಮ್ಮನ ಮೇಲೆ ಕೋಪ

ತಾಯಿಯಿಲ್ಲದ ತವರಿಗೆ ಹೋಗಬೇಕಾದೀತು ನಿಮ್ಮತ್ತಿಗೆಯೂ ಹೀಗೇ ಹಾಕಿದರೆ ಹಿಡಿ ಶಾಪ..


✍️ ಪ್ರವೀಣ ಪಾಟೀಲ್, ಬ್ಯಾಡಗಿ✍️

No comments:

Post a Comment

ಸ್ನೇಹ

 *ಸ್ನೇಹ* ಅಂತರಂಗದ ಭಾವನೆಗಳು ಒಡಮೂಡಿವೆ ಸಮಾನ ಮನಸ್ಸಿನ ವ್ಯಕ್ತಿಯೆದುರು ನೀಡುವನು ಚೈತನ್ಯವನು ಉಲ್ಲಾಸ ತುಂಬಿರಲೆಂದು ಕೈಹಿಡಿದು ನಡೆಯುವನು ಜೀವನ ಸುಂದರವಾಗಿರಲೆಂದು ಯಾ...