Saturday, February 27, 2021

ನರ್ತಕಿ

 *ನರ್ತಕಿ*


( *ಹೊಟ್ಟೆಪಾಡಿಗಾಗಿ ನರ್ತನ* )


ನಟರಾಜನ ಆರಾಧನೆಯಲ್ಲಿ

ಕಲೆಯನ್ನು ಮುಂದಿಡಬಂದಿಹಳು ನರ್ತಕಿ

ನವರಸಗಳನ್ನು ಆಸ್ವಾದಿಸುತ್ತಾ

ನಮ್ಮ ಮನಸಂತೋಷಕ್ಕೆ ಹಾಡಿ ಕುಣಿವಳೀ ನರ್ತಕಿ



ನಾಟ್ಯರಾಣಿಯಾಗಿ ಸೇವೆಗೈದಿಹಳು ಮೋಸಮಾಡದೇ ನಾಟ್ಯರಾಜನಿಗೆ

ಪಿಸುಮಾತಲಿ ಕೊಂಕಾಡುವರು ಮೂಢರು ಅರಿಯದೇ ಅವಳ ಚಡಪಡಿಕೆ



ಮನದಲ್ಲಿ ನೂರಾರು ದುಗುಡ ದುಮ್ಮಾನ 

ಹೊಟ್ಟೆ ಹೊರೆಯಬೇಕೆಂಬ ಸ್ವಾಭಿಮಾನ

ಇರುಳೇ ತನ್ನ ಜಗತ್ತೆಂದು ಸಾಗಿಸುವಳು ಜೀವನ


ಥಳುಕು ಬಳುಕಿನ ನಾಟ್ಯವ ನೋಡಿ ಬಂದಿಹವು ನೂರಾರು ಹೊಗಳಿಕೆ ತೆಗಳಿಕೆ

ಕಿವಿಗೊಡದೇ ಕಾಯ್ದು ಪಡೆಯುವಳು ಮೂರು ಹೊತ್ತಿನ ಊಟಕೆ ಕಾಣಿಕೆ


✍️ ಪ್ರವೀಣ ಪಾಟೀಲ , ಬ್ಯಾಡಗಿ

No comments:

Post a Comment

ಸ್ನೇಹ

 *ಸ್ನೇಹ* ಅಂತರಂಗದ ಭಾವನೆಗಳು ಒಡಮೂಡಿವೆ ಸಮಾನ ಮನಸ್ಸಿನ ವ್ಯಕ್ತಿಯೆದುರು ನೀಡುವನು ಚೈತನ್ಯವನು ಉಲ್ಲಾಸ ತುಂಬಿರಲೆಂದು ಕೈಹಿಡಿದು ನಡೆಯುವನು ಜೀವನ ಸುಂದರವಾಗಿರಲೆಂದು ಯಾ...